ಕನ್ನಡ ರಾಜ್ಯೋತ್ಸವ ಸಂಭ್ರಮ 2026•PES University
ಪ್ರಕಟಣೆ:Kannadada Kannadi 2.0

ಕಲೆಯ ಕಣಜ, ಸಾಹಿತ್ಯದ ತೇರು — ನಮ್ಮ ಕನ್ನಡ ಕೂಟ

ಪಿ.ಇ.ಎಸ್ ವಿಶ್ವವಿದ್ಯಾಲಯದಲ್ಲಿ ಕರುನಾಡ ಕಲೆ-ಸಂಸ್ಕೃತಿಯ ಹೆಜ್ಜೆಯೊಡನೆ ತಾಂತ್ರಿಕತೆಯ ಕೊಂಡಿ ಬೆಸೆಯುವ ಹಂಬಲದ ಮನಸುಗಳಿಗೆ ಸದಾ ತೆರೆದ ಬಾಗಿಲು ನಮ್ಮೀ ಕನ್ನಡ ಕೂಟ 💛❤️.

“ಅಳಿಯದೀ ಕನ್ನಡಂ, ಅಳುಕದೀ ಕನ್ನಡಂ”
300+
ಸಕ್ರಿಯ ಸದಸ್ಯರು
Active Members
15+
ವಾರ್ಷಿಕ ಕಾರ್ಯಕ್ರಮ
Annual Stage Events
5
ಸಾಂಸ್ಕೃತಿಕ ತಂಡಗಳು
Cultural Wings
10+
ನಾಟಕ & ರಂಗಪ್ರಯೋಗ
Stage Productions
PES University and Kannada Koota
ದಿನದ ವಚನ & ದರ್ಶನDaily Wisdom

ಬಸವಣ್ಣ (Basavanna)

"ಕಳಬೇಡ, ಕೊಲಬೇಡ"

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.

ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,

ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

1 of 3
ಇಂದಿನ ಕನ್ನಡ ಪದ
Word of the Day
ನಾಮಪದ (Noun)

ಆತ್ಮೀಯತೆ

[Aatmeeyate]

Warm, hospitable kinship; genuine affection from the core of one's soul.

ವಾಕ್ಯ ಪ್ರಯೋಗ (Usage in Context):

"ನಮ್ಮ ಕನ್ನಡ ಕೂಟಕ್ಕೆ ಬರುವ ಪ್ರತಿಯೊಬ್ಬರಿಗೂ ಆತ್ಮೀಯತೆಯ ಸ್ವಾಗತ."

A warm, affectionate welcome awaits every student who walks into Kannada Koota.

Word 1 of 3
ಲೋಡ್ ಆಗುತ್ತಿದೆ...
ಪಿ.ಇ.ಎಸ್ ವಿದ್ಯಾರ್ಥಿ ಒಕ್ಕೂಟ 2026

ನೀವು ನಮ್ಮ ಕನ್ನಡ ಕೂಟದ ಸದಸ್ಯರಾಗಲು ಇಚ್ಛಿಸುವಿರಾ?

ನಾಟಕ, ಚರ್ಚಾಸ್ಪರ್ಧೆ, ಕವನ ವಾಚನ ಮತ್ತು ವಾರ್ಷಿಕ ರಾಜ್ಯೋತ್ಸವ ಆಚರಣೆಗಳಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಪಾಲ್ಗೊಳ್ಳಿ.

ಸಮುದಾಯಕ್ಕೆ ಸೇರಿ
ಧ್ಯೇಯ & ನಿಲುವು • CORE VALUES

ನಮ್ಮ ಧ್ಯೇಯ, ದಾರಿ ಮತ್ತು ನಂಬಿಕೆ

The timeless values that inspire every festival, stage show, and workshop at PES University.

VISION

ನಮ್ಮ ಧ್ಯೇಯ

ಮನಸ್ಸುಗಳ ನಡುವೆ ಭಾವಪರಾಗವನ್ನು ರವಾನಿಸುವ ದುಂಬಿ ಭಾಷೆ. ದುಂಬಿ ಸಂಪಾದಿಸಿಹ ಜೇನು ಕನ್ನಡ! ಆ ಜೇನ ಹೀರುವ ರಸಿಕರು ನಾವುಗಳು!

ಕನ್ನಡದ ಪರವಾಗಬೇಕು, ಕನ್ನಡದ ಕಾಯಕಕ್ಕೆ ಕೈ ಜೋಡಿಸುವ ಕರವಾಗಬೇಕು, ಮಾತೆಯ ಕೊರಳಲ್ಲಿನ ಸರವಾಗಬೇಕು, ಕನ್ನಡದ ಉದ್ಯಾನದಲ್ಲೊಂದು ಮರವಾಗಬೇಕು ಎಂಬುದೇ ನಮ್ಮ ಆಶಯ!

PATHWAY

ನಮ್ಮ ದಾರಿ

ಕರ್ನಾಟಕದ ಹಾಡು-ಕುಣಿತ, ಭವ್ಯತೆ-ನವ್ಯತೆ, ಪ್ರಕೃತಿ-ಸಂಸ್ಕೃತಿ, ಸಂಪದ-ಜಾನಪದ, ಉಡುಗೆ-ತೊಡುಗೆ, ಊಟ-ಉಪಚಾರ, ಹಬ್ಬ-ಹರಿದಿನ, ವ್ಯವಹಾರ-ಆಚರಣೆ, ರೀತಿ-ನೀತಿ‌-ಪ್ರೀತಿ ಹೀಗೆ ಹತ್ತು ಹಲವಾರು ಧಾತುಗಳ ನಡುವಿನ ಸೇತುವಾಗಿ ನಿಲ್ಲುವುದೇ ನಮ್ಮ ನಿಲುವು. ಇವೆಲ್ಲವನ್ನು ಸ್ವಾಗತಿಸುವ ಮತ್ತು ಸಂಭ್ರಮಿಸುವ ಸಾಂಸ್ಕೃತಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳ ಮುಖಾಂತರ ನಮ್ಮತನದ ಭಾವನೆಯನ್ನು ಉದ್ದೀಪಿಸುವ ಕೆಲಸ ನಮ್ಮದು.

BELIEF

ನಮ್ಮ ನಂಬಿಕೆ

ಭಾಷೆ ಎಂಬುದು ಪೆಟ್ಟಿಗೆಯಲ್ಲಿ ಗಾಜಿನ ಹಿಂದಿಟ್ಟು ಸಂರಕ್ಷಿಸುವ ಗ್ರಂಥ ಎನ್ನುವುದಕ್ಕಿಂತ ಅದರ ಪ್ರತಿ ಶಬ್ದವೂ ನಮ್ಮ ಸ್ವಂತ ಎನ್ನುವುದು ನಮ್ಮ ನಂಬಿಕೆ.

ನಮ್ಮ ಪಾಲಿಗೆ ಇದು ಬರೀ ಭಾಷೆಯಲ್ಲ, ನಮ್ಮ ನಾಲಿಗೆಯ ತುಡಿತ, ಎದೆಯ ಬಡಿತ, ಮನಸ್ಸಿನ ಮಿಡಿತ!

ಕಲಾ ವಿಭಾಗಗಳು • ARTISTIC WINGS

ನಮ್ಮ ಸಾಂಸ್ಕೃತಿಕ ಕಲಾ ತಂಡಗಳು

Five powerhouse artistic wings driving every performance, audition, and campus fest.

ಬೆಡಗು
TRADITION
ಬೆಡಗು
ಸಾಂಸ್ಕೃತಿಕ ನೃತ್ಯ ತಂಡ

ಕನ್ನಡ ನಾಡಿನ ಸಂಸ್ಕೃತಿಯ ಬಿತ್ತರಿಸುವ ನೃತ್ಯ ಸಿರಿ, ಧೀಮಂತ ಪರಂಪರೆಗಳ ಒಡಲೊಳು ಹರಿಯುವ ನಾಟ್ಯ ಝರಿ, ಜಾನಪದ ನೃತ್ಯಗಳ ಬೆಡಗನ್ನು ಬಿಂಬಿಸುವ ನಾಟ್ಯಗರಿ!

ಕನ್ನಡ ಕೂಟ ವಿಭಾಗPES University SAC
ಅಲಂಕಾರ
FASHION
ಅಲಂಕಾರ
ಫ್ಯಾಷನ್ ತಂಡ

ಬಿಂಕ–ಬಿನ್ನಾಣದೊಂದಿಗೆ ನಮ್ಮ ನಾಡಿನ ಸೊಬಗನ್ನು ಮೆರೆಸುವ ಕಲಾವೃಂದ, ವಿವಿಧ ಶೈಲಿಯ ಉಡುಪು ಧಾರಣೆಯೊಂದಿಗೆ ವೇದಿಕೆಯನ್ನು ಶೃಂಗರಿಸುವ ಕಲಾರವಿಂದ!

ಕನ್ನಡ ಕೂಟ ವಿಭಾಗPES University SAC
ಬಲವ್
FUSION
ಬಲವ್
ಪಾಶ್ಚಾತ್ಯ ನೃತ್ಯ ತಂಡ

ಹುರುಪಿನ ಹೆಜ್ಜೆಗಳೊಂದಿಗೆ ಸಾಂಸ್ಕೃತಿಕ ಲಯವ ಬೆಸೆವ ಚೈತನ್ಯ ಲಹರಿ, ಉತ್ಸಾಹ ಭರಿತ ಭರ್ಜರಿ ಪ್ರದರ್ಶನಗಳೊಂದಿಗೆ ತನು ಮನವ ಕುಣಿಸುವ ನಾಟ್ಯಮಂಜರಿ!

ಕನ್ನಡ ಕೂಟ ವಿಭಾಗPES University SAC
ಇಂಚರ
VOCALS
ಇಂಚರ
ಗಾಯನ ತಂಡ

ಗಾಯನದ ಇಂಪಲ್ಲಿ, ಕನ್ನಡದ ಕಂಪನ್ನು ಚೆಲ್ಲುವ ಸವಿಗಾನದಂಗಳ, ಭಾವ ಸ್ವರಗಳನುಲಿದು, ಸಾಹಿತ್ಯಮಾಧುರ್ಯವ ಮೆರೆಸುವ ಸಂಗೀತದಳ!

ಕನ್ನಡ ಕೂಟ ವಿಭಾಗPES University SAC
ರಂಗತರಂಗ
THEATRE
ರಂಗತರಂಗ
ನಾಟಕ ವೃಂದ

ನವರಸವನು ಅರಗಿಸಿಹ ಅಭಿನಯ ಚತುರರ ರಂಗಸಜ್ಜಿಕೆ, ನಟನೆಯಿಂದ ಕಲಾರಸಿಕರ ಮನವ ನಾಟುವ ಕಥಾಶರ ಬತ್ತಳಿಕೆ!

ಕನ್ನಡ ಕೂಟ ವಿಭಾಗPES University SAC
ಸಾಹಿತ್ಯ & ಲೇಖನಗಳು • LITERATURE

ಸಾಹಿತ್ಯ ಕಣಜ & ವಿದ್ಯಾರ್ಥಿ ಲೇಖನಗಳು

ನಮ್ಮ ಸದಸ್ಯರಿಂದ ಕವಿತೆ, ವಿಮರ್ಶಾತ್ಮಕ ಪ್ರಬಂಧಗಳು ಮತ್ತು ಸಾಂಸ್ಕೃತಿಕ ಬರಹಗಳು.

ಲೇಖನಗಳು ಲೋಡ್ ಆಗುತ್ತಿವೆ...